Monday, July 4, 2011

ಬೆಂಗಳೂರು ಮಹಾತ್ಮೆ :-)

ತುಂಬಾ ದಿನದಿಂದ ಕನ್ನಡದಲ್ಲಿ ಬ್ಲಾಗ್ ಬರೀಬೇಕು ಅನ್ನೋ ಆಸೆ, ಇವತ್ತು ಒಂದು ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ. :-)


ಕೆಲಸಕ್ಕೆ ಸೇರಿ ಹಾಗು ಬೆಂಗಳೂರುಗಿ ಬಂದು 15 ವರುಷ ಆಯಿತು. ಈ 15 ವರುಷದಲ್ಲಿ, ನನ್ನ ಸ್ನೇಹಿತ ವರ್ಗದಲ್ಲಿ more than 75% ಬೇರೆ ದೇಶದಲ್ಲಿ ವಲಿಸಿದ್ದಾರೆ ಅಂದರೆ ಉತ್ಪ್ರೇಕ್ಷೆ ಆಗುವಿದಿಲ್ಲ ಅಂತ ಅನಿಸಿಕೆ. ನನಗೂ ಕೆಲವೊಮ್ಮೆ ಅನ್ನಿಸಿದಿದೆ, ನಾನು ಯಾಕೆ ಹಾಗೆ ಬೇರೆ ದೇಶದಲ್ಲಿ ಕೆಲಸ ಮಾಡಲು ಹಾಗು ಅಲ್ಲೇ settle ಆಗಕ್ಕೆ ಹೋಗಲಿಲ್ಲ ಎಂದು. ಹೌದು, ನಮ್ಮ ಬಂದು, ಬಳಗ ಎಲ್ಲ ಇಲ್ಲೇ ಇದ್ದಾರೆ, ಅವರನ್ನ ತುಂಬಾ ದಿನ ಮಿಸ್ ಮಾಡೋದು ಕಷ್ಟ. ಅದು ಒಂದು ಕಾರಣ ಇರಬಹುದು. ಅದಕ್ಕಿಂತ ಮಿಗಲಾಗಿ ಬೆಂಗಳೂರಿನ ಪರಿಸರ ಇರಬಹುದಾ ಅಂತ ಒಂದು thought.


ನಾನು ಯಾವುದೇ ದೇಶಕ್ಕೆ (ದೇಶ ಬಿಡಿ, ಬೇರೆ ಊರಿಗೆ) ಹೋದರು, ಮೊದಲು miss ಮಾಡೋದೇ ನಮ್ಮ ಬೆಂಗಳೂರಿನ ಸಾಗರಗಳನ್ನ. "ಶಾಂತಿ ಸಾಗರ", "ಶ್ರೀ ಸಾಗರ", "ನ್ಯೂ ಸಾಗರ", "ಓಲ್ಡ್ ಸಾಗರ", ಸಾಕ ಸಾಗರಗಳ ಪಟ್ಟಿ? ನಾವೆಲ್ಲ ಚಿಕ್ಕವರಾಗಿದ್ದಾಗ "MTR", "ವಿದ್ಯಾರ್ಥಿ ಭವನ" ಈ ತರಹ ಹೋಟೆಲ್ಗಳ "ಮಸಾಲ ದೋಸೆ", "ಇಡ್ಲಿ ವಡೆ", ಕಾಫಿ ಬಗ್ಗೆ ಸಾಕಷ್ಟು ಕೇಳಿದ್ದುಂಟು. ಹೌದು, ಆಗಿನ ದಿನಗಳಲ್ಲಿ ಬೆಂಗಳೂರು ಇಷ್ಟು ದೊಡ್ದದಿರಲಿಲ್ಲ, so MTR ಹಾಗು ವಿದ್ಯಾರ್ಥಿ ಭವನಕ್ಕೆ ಎಲ್ಲರಿಗೂ ಹೋಗುವ ಆಸ್ಪದ, ಅವಕಾಶ ಇತ್ತು. ಆದರೆ ಈಗ ಒಂದೊಂದು ಬಡಾವಣೆಯಲ್ಲೂ ಒಂದೊಂದು "ಸಾಗರಗಳು". MTR ಟೇಸ್ಟ್ ಗಿಂತ ಒಂದು ಕೈ ಮಿಗಿಲು. Weekend ಅಲ್ಲಿ ಕ್ರಿಕೆಟ್ ಆಡಿದ ಮೇಲೋ, walking ಆದ ಮೇಲೋ ಈ ಸಾಗರಕ್ಕೆ ನುಗ್ಗಿ ಒಂದು ಮಸಾಲೆ ದೋಸೆನೋ, ಇಡ್ಲಿ-ವಡೆನೋ ತಿನ್ನುವ ಮಜಾ ಯಾವ ದೇಶದ ಯಾವ ಊರಲ್ಲಿ ಸಿಗತ್ತೆ ಹೇಳಿ ನೋಡೋಣ :-)


ಈ ಹೋಟೆಲ್ ಸಾಗರ ಒಂದು ಕಡೆ ಆದರೆ, ಹಲವಾರು ವಿಭಿನ್ನ ಚಟುವಟಿಕಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇನ್ನೊಂದು ಕಡೆ. ವೀಕೆಂಡ್ ಅಲ್ಲಿ classical ಮ್ಯೂಸಿಕ್ ಕೇಳಬೇಕ, ನಾಟಕ ನೋಡಬೇಕ ಅಥವಾ ಕ್ರಿಕೆಟ್/Football/Badminton ಆಟ ಆಡಬೇಕ, ಎಲ್ಲದಕ್ಕೂ ಸಮಾನ ಅವಕಾಶ ಸಿಗುವದು ನಮ್ಮ ಬೆಂಗಳುರುಅಲ್ಲಿ ಮಾತ್ರ :-) ಇತ್ತೀಚಿನ ದಿನಗಳಲ್ಲಿ BBMP ಅವರು ಸುಮಾರು ಪಾರ್ಕ್ ಗಳನ್ನೂ ಚೆನ್ನಾಗಿ maintain ಮಾಡಿರುವದರಿಂದ, ಜನ ಸಾಮಾನ್ಯರಿಗೆ ವರ್ಷವಿಡೀ walking ಹೋಗಲು ಯಾವುದೇ ತೊಂದರೆ ಇಲ್ಲ. ಇಂತ ಒಂದು ಪರಿಸರ, ಇಂತ ಒಂದು living place ಎಲ್ಲಿ ಸಿಗತ್ತೆ ಹೇಳಿ ? :-)


ಯಾವುದೇ ಊರು ಅಂದ ಮೇಲೆ issues ಇದ್ದೆ ಇರತ್ತೆ. ಬೆಂಗಳೂರಿನ traffic problem ಇರಬಹುದು, ಮೆಟ್ರೋ work ಇರಬಹುದು, ನಾವು ಬೆಂಗಳುರನ್ನ ಎಷ್ಟೇ ಬಯ್ಯಬಹುದು, ಆದರೂ ಇದೆಲ್ಲಕಿಂತ ಮಿಗಲಾಗಿ ಇಲ್ಲಿನ ಪರಿಸರ, ಇಲ್ಲಿನ ಅವಕಾಶಗಳು for involving in different activities, ಇಲ್ಲಿನ ಸಾಗರಗಳು makes Bengaluru a perfect city to live in :-)


ಜೈ ಬೆಂಗಳೂರು, ಜೈ ಕರ್ನಾಟಕ :-)

1 comment: